ಸರಿಯಾದ ದಾರಿ, ಸತ್ಯ ಮತ್ತು ಸರಿಯಾದ ಜೀವನ ಝೆನ್ ಧರ್ಮಗುರುವೊಬ್ಬ ತನ್ನ ಶಿಷ್ಯಂದಿರಿಗೆ ಧರ್ಮವನ್ನು ಬೊಧಿಸುತ್ತಾ ಹೇಳಿದ ನೀವು ನಿಮ್ಮ ನಿಜವಾದ ಸ್ವರೂಪ(ಆತ್ಮ)ವನ್ನು ಅರಿತರೆ ನಂತರ ನೀವು ಸರಿಯದ ದಾರಿ, ಸತ್ಯ ಮತ್ತು ಸರಿಯಾದ ಜೀವನವನ್ನು ಹೊಂದುವಿರಿ. ಹಾಗಾದರೆ ಸರಿಯಾದ ದಾರಿ ಯಾವುದು? ಎಂದು ಶಿಷ್ಯನೊಬ್ಬ ಗುರುವನ್ನು ಪ್ರಶ್ನಿಸಿದ. ಆದಕ್ಕೆ ಗುರು, ನೀನು ದಿನಾ ಯಾಕೆ ಊಟ ಮಾಡುತ್ತೀಯಾ, ಬರೀ ನಿನ್ನ ದೇಹಕ್ಕಾಗಿ, ನಿನ್ನ ಆಸೆ ತೀರಿಸಿಕೊಳ್ಳುವುದಕ್ಕಾಗಿ ಅಥವಾ ನಿನಗಾಗಿ? ಹಾಗಾದರೆ ನೀನು ಮೃಗಗಳಂತೆ ಎಂದಾಯಿತು. ಹಾಗಲ್ಲದೆ ನೀನು ತಿನ್ನುವುದು ಇತರ ಎಲ್ಲಾ [...]